ಸಮುದ್ರ ಬಂದರುಗಳು ಪ್ರದೇಶಗಳ ನಡುವೆ ಸರಕುಗಳ ವ್ಯಾಪಾರಕ್ಕೆ ಪ್ರಮುಖ ಪ್ರವೇಶದ್ವಾರಗಳಾಗಿವೆ ಮತ್ತು ಸರಕು ಸಾಗಣೆ ಚಟುವಟಿಕೆಗಳ ಲಾಜಿಸ್ಟಿಕ್ ಸರಪಳಿಯಲ್ಲಿ ಪ್ರಮುಖ ಮೂಲಸೌಕರ್ಯವಾಗಿ ಕಾರ್ಯನಿರ್ವಹಿಸುತ್ತವೆ.
ಭಾರತದಲ್ಲಿ, ಸಾಗರ ಸಾರಿಗೆಯು ರಫ್ತು-ಆಮದು ಸರಕುಗಳಿಗೆ ಅತಿ ಹೆಚ್ಚಿನ ಮಾದ್ಯಮ ಪಾಲನ್ನು ಹೊಂದಿದೆ. ಸಮುದ್ರ ಮಾರ್ಗಗಳು ದೊಡ್ಡ ಪ್ರಮಾಣದ ಸರಕುಗಳನ್ನು ಸಾಗಿಸಲು ಪರಿಣಾಮಕಾರಿ ಮತ್ತು ವೆಚ್ಚ-ಕಡಿತ ಮಾರ್ಗವನ್ನು ಒದಗಿಸುತ್ತವೆ. ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ (MoPSW) ಅಂದಾಜಿನ ಪ್ರಕಾರ, ಮುಂಬರುವ ವರ್ಷಗಳಲ್ಲಿ ಬಂದರುಗಳಲ್ಲಿನ ಸಂಚಾರವು ಘಾತೀಯವಾಗಿ ಬೆಳೆಯುವ ಸಾಧ್ಯತೆ ಇದೆ.
ಭಾರತೀಯ ಕರಾವಳಿಯಲ್ಲಿ ಸರಕು ದಟ್ಟಣೆ ಹೆಚ್ಚುತ್ತಿರುವುದರಿಂದ, ಸರಕುಗಳನನು ಕೇಂದ್ರೀಕರಿಸಿ ಉತ್ತಮ ಗುಣಮಟ್ಟದ ಬಂದರು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯ 31.03.2019 ರಂತೆ, ಭಾರತದ ಪ್ರಮುಖ ಬಂದರುಗಳಲ್ಲಿ ಸರಕು ಸಂಚಾರವನ್ನು ನಿರ್ವಹಿಸಲು ಒಟ್ಟು 344 ಬರ್ತ್‌ಗೆ, 9 ಸಿಂಗಲ್ ಬಾಯ್ ಮೂರಿಂಗ್‌ಗಳನ್ನು ಮತ್ತು ಎರಡು ಬಾರ್ಜ್ ಜೆಟ್ಟಿಗಳನ್ನು ಹೊಂದಿವೆ. ಪ್ರಮುಖವಲ್ಲದ ಬಂದರುಗಳನ್ನು ಒಳಗೊಂಡಂತೆ 300 ಕ್ಕೂ ಹೆಚ್ಚು ಬರ್ತ್‌ಗಳನ್ನು ಹೊಂದಿರುತ್ತದೆ.
ಭಾರತೀಯ ಬಂದರುಗಳ ಹೆಚ್ಚಾಗಿ ವಿವಿಧೋದ್ದೇಶ ಬರ್ತಿಂಗ್ ನಿಂದ (ಸರಿ ಸುಮಾರು 60% ) ಪ್ರಾಬಲ್ಯವನ್ನು ಹೊಂದಿದೆ ಎಂದು ಗಮನಿಸಬೇಕು.
ಕರ್ನಾಟಕ ರಾಜ್ಯದ ಬಂದರು ಮತ್ತು ಜಲಮಾರ್ಗಗಳ ಮೂಲಸೌಕರ್ಯ ಅಭಿವೃದ್ಧಿಯ ಜವಾಬ್ದಾರಿ ಕರ್ನಾಟಕ ಮೆರೈನ್ ಮಂಡಳಿ (KMB)ಗೆ ಇರುತ್ತದೆ.
ಕೆಎಂಬಿಯು ಭಾರತೀಯ ರಾಜ್ಯಗಳಾದ್ಯಂತ ಸರಕು ಸಾಗಣೆಗಾಗಿ ಸರಾಗ ಸರಬರಾಜು-ಸರಪಳಿ ಲಾಜಿಸ್ಟಿಕ್‌ಗಳನ್ನು ಸುಗಮಗೊಳಿಸುವುದು ಮತ್ತು ಅಂತರರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ಮುಖ್ಯ ಉದ್ದೇಶವಾಗಿದೆ.
ರಾಜ್ಯವು ವ್ಯಾಪಕ ಶ್ರೇಣಿಯ ಕೃಷಿ ಮತ್ತು ಕೈಗಾರಿಕಾ ಸರಕುಗಳನ್ನು ರಫ್ತು ಮಾಡುತ್ತದೆ, ಉದಾಹರಣೆಗೆ ರೇಷ್ಮೆ, ಚಂದನದ ಎಣ್ಣೆ, ಕರಕುಶಲ ವಸ್ತುಗಳು, ಉಡುಪುಗಳು, ಕಾಫಿ, ಕಬ್ಬಿಣದ ಅದಿರು, ಸುಧಾರಿತ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸರಕುಗಳು. ಕಳೆದ ಎರಡು ದಶಕಗಳಲ್ಲಿ, ರಾಜ್ಯವು ಎಂಜಿನಿಯರಿಂಗ್ ಸರಕುಗಳು, ಉಡುಪುಗಳು, ಚರ್ಮದ ವಸ್ತುಗಳು, ರಾಸಾಯನಿಕಗಳು, ಖನಿಜಗಳು ಮತ್ತು ಅದಿರುಗಳ ರಫ್ತು ಮಾಡುವಲ್ಲಿ ಪ್ರಮುಖ ಪಾತ್ರವಾಗಿ ಹೊರಹೊಮ್ಮಿದೆ.