ಮೂಲಸೌಕರ್ಯ ಅಭಿವೃದ್ಧಿ,
Ports & Inland Water Transport Department

ಕರ್ನಾಟಕ ಜಲಸಾರಿಗೆ ಮಂಡಳಿ

ಐಐಟಿ ಮದ್ರಾಸಿನ ರಿಸರ್ಚ್ ಪಾರ್ಕ್‌ನಲ್ಲಿ ನಡೆದ ವಿಶ್ವ ಸಾಗರ ಶೃಂಗಸಭೆ ಹಾಗೂ ವಿಜ್ಞಾನ ಕಾಂಗ್ರೆಸ್‌ನ 2024ನೇ ಸಮ್ಮೇಳನ.

ಪತ್ರಿಕಾ ಪ್ರಕಟಣೆ:

ಸನ್ಮಾನ್ಯ ಡಾ. ಎಂ. ರವಿಚಂದ್ರನ್ ಕಾರ್ಯದರ್ಶಿಗಳು, ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರ ಹಾಗೂ ಸನ್ಮಾನ್ಯ ಶ್ರೀ ಜಯರಾಮ್ ರಾಯಪುರ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ಜಲಸಾರಿಗೆ ಮಂಡಳಿ ರವರು ದಿನಾಂಕ: 28.02.2024 ರಂದು ಐಐಟಿ ಮದ್ರಾಸಿನ ರಿಸರ್ಚ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ವಿಶ್ವ ಸಾಗರ ಶೃಂಗಸಭೆ ಹಾಗೂ ವಿಜ್ಞಾನ ಕಾಂಗ್ರೆಸ್‌ನ 2024ನೇ ಸಮ್ಮೇಳನದಲ್ಲಿ ಭಾಗವಹಿಸಿದರು.

(ಎಡದಿಂದ ಬಲಕ್ಕೆ) ಡಾ|| ಜಿ.ಎ. ರಾಮದಾಸ್‌ ನ್ಯಾಷನ್ಲ್‌, ಇನ್‌ಸ್ಟೂಟ್‌ ಆಫ್‌ ಓಷನ್‌ ಟೆಕ್ನಾಲಜಿ ನಿರ್ದೇಶಕರು ಡಾ|| ಎಂ. ರವಿಚಂದ್ರ, ಕಾರ್ಯದರ್ಶಿಗಳು, ಭೂ ವಿಜ್ಞಾನ ಸಚಿವಾಲಯದ, ಭಾರತ ಸರ್ಕಾರದ. ಶ್ರೀ ಜಯರಾಮ್‌ ರಾಯಪೂರ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ಕರ್ನಾಟಕ ಜಲಸಾರಿಗೆ ಮಂಡಳಿ ಮತ್ತು ಶ್ರೀ ಸಮೀಪ್‌ ಜೈನ್‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬ್ಲಾಕ್‌ ಬ್ರಿಕ್ಸ್‌ ಮತ್ತು ಪ್ರಾಜೆಕ್ಟ್‌ ಮ್ಯಾನೆಜ್‌ಮೆಂಟ್‌ ಘಟಕ, ಕರ್ನಾಟಕ ಜಲಸಾರಿಗೆ ಮಂಡಳಿ. 

ಈ ಸಭೆಯಲ್ಲಿ ಫ್ರಾನ್ಸ್, ಅಂಗೋಲಾ, ಮೊಜಾಂಬಿಕ್, ಬಾಂಗ್ಲಾದೇಶ್, ಕಾಂಗೋ ಮತ್ತು ಫಿಲಿಪೈನ್ಸ್‌ ದೇಶಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಹಾಜರಿದ್ದರು. ಡಾ. ಎಂ. ರವಿಚಂದ್ರನ್ ರವರು ಸಮ್ಮೇಳನದ ವಿಶೇಷತೆಯನ್ನು ವಿವರಿಸುತ್ತಾ, ಈ ಶತಮಾನವನ್ನು "ಸೆಂಚುರಿ ಆಫ್ ಓಷನ್" ಎಂದು ಪರಿಗಣಿಸುವ ಬಗ್ಗೆ ಒತ್ತಾಯಿಸಿದರು. ಅಲ್ಲದೇ ಆಹಾರ, ಶಕ್ತಿ, ಸಾಗರ ಹಾಗೂ ಜನರ ಆರೋಗ್ಯ ಮತ್ತು ವಾತಾವರಣದ ಬದಲಾವಣೆ ಈ 5 ಅಂಶಗಳ ಕಡೆಗೆ ಗಮನಹರಿಸುವುದು ಸೂಕ್ತವೆಂದು ಅಭಿಪ್ರಾಯಪಡುತ್ತಾ, ಮುಂಬರುವ “ಬ್ಲೂ ಎಕನಾಮಿಕ್” ನೀತಿಯ ಅವಶ್ಯಕತೆಯನ್ನು ಸಮರ್ಥಿಸಿದರು. ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಸಾರಿಗೆ ವಲಯಗಳಲ್ಲಿನ ಸವಾಲುಗಳು ಮತ್ತು ಇರುವ ಅವಕಾಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಶ್ರೀ ಜಯರಾಮ್ ರಾಯಪುರ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ಜಲಸಾರಿಗೆ ಮಂಡಳಿ ವಿಶ್ವ ಸಾಗರ ಸಮೇಳನದ ಉದ್ದೇಶವು ಸಫಲಗೊಳ್ಳಲು ಸಹಯೋಗದ ಆಡಳಿತಾತ್ಮಕ ಅವಶ್ಯಕತೆಯ ಬಗ್ಗೆ ವಿವರಿಸಿದರು. ಮಂಗಳೂರಿನ ಉಲ್ಲಾಳದಲ್ಲಿ ಅಂತರಾಷ್ಟ್ರೀಯ cruise ಟರ್ಮಿನಲ್ನ ನಿರ್ಮಾಣದ ಯೋಜನೆಯ ಅವಶ್ಯಕತೆಯ ಬಗ್ಗೆ ವಿವರಿಸುತ್ತಾ, ಈ ಯೋಜನೆಯು ಕರ್ನಾಟಕ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಿಗೂ ಅನುಕೂಲಕರವಾಗುವುದಲ್ಲದೇ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯವು "ಸೆಂಟರ್ ಆಫ್ ಬ್ಲ್ಯೂ ಎಕಾನಮಿ" ನ್ನು ಭೂ‌ ವಿಜ್ಞಾನ ಮಂತ್ರಾಲಯದ ಅಧೀನದಲ್ಲಿ ಪಶ್ಚಿಮ ಕರಾವಳಿಯಲ್ಲಿ ಕರ್ನಾಟಕವನ್ನು ಕೇಂದ್ರವಾಗಿರಿಸಿ ಸ್ಥಾಪಿಸಲು ಕೋರಿದರು.

ಮಾನ್ಯ ಕಾರ್ಯದರ್ಶಿಗಳು, ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರರವರು ಈ ಪ್ರಸ್ತಾವನೆಗಳನ್ನು ಪ್ರಶಂಸಿಸುತ್ತಾ, ಇವುಗಳ ಚಾಲನೆಗೆ ಅಗತ್ಯ ಸಹಕಾರದ ಭರವಸೆಯನ್ನು ನೀಡಿದರು. ಕರ್ನಾಟಕದ ಕರಾವಳಿಯು ಸಾಕಷ್ಟು ಪ್ರಮಾಣದಲ್ಲಿ ಸಮುದ್ರ ಕೊರೆತಕ್ಕೆ ತುತ್ತಾಗುತ್ತಿದ್ದು ಇದನ್ನು ತಡೆಗಟ್ಟಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಸಲಹೆಯನ್ನು ನೀಡಿದರು. ವಿಶ್ವ ಸಾಗರ ಶೃಂಗಸಭೆಯು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಪ್ರತಿನಿಧಿಗಳ ಕ್ರಿಯಾತ್ಮಕ ವೇದಿಕೆಯಾಗಿ ಮಾರ್ಪಟ್ಟಿತ್ತು.

ಈ ಸಾಗರಕೇಂದ್ರಿತ ಸುಸ್ಥಿರ ಮರಿಟೈಮ್ ಹಾಗೂ ಜಾಗತಿಕವಾಗಿ ದೊರಕುವ ಸಹಕಾರವು ಕರ್ನಾಟಕ ರಾಜ್ಯದ ಕರಾವಳಿಯ ಭದ್ರತೆಯನ್ನು ದೃಢಗೊಳಿಸುವುದರಿಂದ ಈ ಸಹಕಾರಕ್ಕೆ ರಾಜ್ಯವು ಸಮರ್ಪಣಾ ಭಾವವನ್ನು ವ್ಯಕ್ತಪಡಿಸಿತು.

 

admin
Author: admin

Previous ಕರ್ನಾಟಕ ಜಲಸಾರಿಗೆ ಮಂಡಳಿಯ 10ನೇ ಸಭೆಯನ್ನು ದಿನಾಂಕ

Leave Your Comment

CONTENT OWNED AND MAINTAINED BY : Infrastructure Development Ports & Inland Water Transport Department

Last Updated : 05-10-2023 01:13 PM

Designed, Developed and Hosted by: Center for e-Governance - Web Portal, Government of Karnataka © 2024, All Rights Reserved.