Infrastructure Development,
Ports & Inland Water Transport Department

Asset 1

ಕರ್ನಾಟಕ ರಾಜ್ಯವು 150 ನಾಟಿಕಲ್‌ ಮೈಲ್‌ಗಳಷ್ಟು (300 ಕಿ.ಮಿ) ಕಡಲ ತೀರವನ್ನು ಹೊಂದಿದೆ. ಇದು ಉತ್ತರದಲ್ಲಿ ಕಾರವಾರ ಮತ್ತು ದಕ್ಷಿಣದಲ್ಲಿ ಮಂಗಳೂರು ಸೇರಿದಂತೆ ಒಟ್ಟು 12 ಸಣ್ಣ ಬಂದರುಗಳಿಂದ ಕೂಡಿದೆ. ರಾಜ್ಯದ ಕರಾವಳಿಯು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುತ್ತುವರೆದಿದೆ. ರಾಜ್ಯದ 12ಬಂದರುಗಳಾದ ಕಾರವಾರ, ಬೇಲಿಕೇರಿ ತದಡಿ, ಹೊನ್ನಾವರ, ಭಟ್ಕಳ, ಕುಂದಾಪುರ (ಗಂಗೊಳ್ಳಿ) ಹಂಗಾರಕಟ್ಟಾ, ಮಲ್ಪೆ, ಪಡುಬಿದ್ರಿ ಮತ್ತು ಹಳೇ ಮಂಗಳೂರು ಇವುಗಳ ಪೈಕಿ ಕಾರವಾರ ಮಾತ್ರ ಏಕೈಕ ಸರ್ವಋತು ಬಂದರಾಗಿದ್ದು, ಉಳಿದ ಕಿರು ಬಂದರುಗಳು, ಎಂಕರೇಜ್‌ / ಲೈಟರೇಜ್‌ ಬಂದರುಗಳಾಗಿ ಕಾರ್ಯನಿರ್ವಹಿಸುತ್ತಿದೆ.

ಸಮುದ್ರ ಬಂದರುಗಳು ದೇಶಗಳ ನಡುವಿನ ಸರಕುಗಳ ವ್ಯಾಪಾರಕ್ಕೆ ಪ್ರಮುಖ ಹೆಚ್ಚಾಗಿದೆ. ಸರಕುಗಳ ಆರ್ಥಿಕ ಸಾಗಣೆಯಲ್ಲಿನ ಚಟುವಟಿಕೆಗಳ ಲಾಜಿಸ್ಟಿಕ್‌ ಸರಪಳಿಯಲ್ಲಿ ಬಂದರುಗಳು ಪ್ರಮುಖ ಮೂಲಸೌಕರ್ಯವನ್ನು ರೂಪಿಸುತ್ತವೆ.

ಭಾರತದಲ್ಲಿ ಲಭ್ಯವಿರುವ ಬಂದರುಗಳ ಸಾಮರ್ಥ್ಯ ಮತ್ತು ಬಂದರು ಸೇವೆಗಳಿಗೆ ಭಾರಿ ಬೇಡಿಕೆಯ ನಡುವೆ ದೊಡ್ಡ ಅಂತರವಿದೆ ಎಂಬುದು ಒಪ್ಪಿತ ಸತ್ಯ. ಭಾರತದಲ್ಲಿ, ಸಾಗರ ಸಾಗಣೆಯು ರಪ್ತು- ಆಮದು ಸರಕುಗಳ ಅತ್ಯಧಿಕ ಮೋಡಲ್‌ ಪಾಲನ್ನು ಹೊಂದಿದೆ. ಸಮುದ್ರದ ಮಾರ್ಗಗಳು ಹೆಚ್ಚಿನ ಪ್ರಮಾಣದ ಸರಕುಗಳನ್ನು ಸಾಗಿಸುವ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದಾಯಕ ವಿಧಾನವನ್ನು ಒದಗಿಸುತ್ತವೆ. ಶಿಪ್ಪಿಂಗ್‌ ಸಚಿವಾಲಯದ ಅಂದಾಜಿನ ಪ್ರಕಾರ, ಪ್ರಸ್ತುತ ಮಟ್ಟದಿಂದ 2020-21 ರ ವೇಳೆಗೆ ಸಮುದ್ರ ಬಂದರುಗಳಲ್ಲಿನ ದಟ್ಟಣೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಭಾರತೀಯ ಕರಾವಳಿಯಲ್ಲಿ ಸರಕು ದಟ್ಟಣೆ ಹೆಚ್ಚುತ್ತಿರುವುದರಿಂದ, ಸರಕುಗಳನನು ಕೇಂದ್ರೀಕರಿಸಿ ಉತ್ತಮ ಗುಣಮಟ್ಟದ ಬಂದರು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯ 31.03.2019 ರಂತೆ, ಭಾರತದ ಪ್ರಮುಖ ಬಂದರುಗಳಲ್ಲಿ ಸರಕು ಸಂಚಾರವನ್ನು ನಿರ್ವಹಿಸಲು ಒಟ್ಟು 344 ಬರ್ತ್‌ಗೆ, 9 ಸಿಂಗಲ್‌ ಬಾಯ್‌ ಮೂರಿಂಗ್‌ಗಳನ್ನು ಮತ್ತು ಎರಡು ಬಾರ್ಜ್‌ ಜೆಟ್ಟಿಗಳಿವೆ. ಪ್ರಮುಖವಲ್ಲದ ಬಂದರುಗಳನ್ನು ಒಳಗೊಂಡಂತೆ 300 ಕ್ಕೂ ಹೆಚ್ಚು ಬರ್ತ್‌ಗಳನ್ನು ಹೊಂದಿರುತ್ತದೆ. ಭಾರತೀಯ ಬಂದರುಗಳ ಹೆಚ್ಚಾಗಿ ವಿವಿಧೋದ್ದೇಶ ಬರ್ತಿಂಗ್‌ ನಿಂದ (ಸರಿ ಸುಮಾರು 60% ) ಪ್ರಾಬಲ್ಯವನ್ನು ಹೊಂದಿದೆ ಎಂದು ಗಮನಿಸಬೇಕು.

Property Details

Sanction Order
Land Details Purpose Period GPS Coordinates Piece of Actual Sketch Lease / Rent
Alloted Area (sqmtr) Survey No Start Date End Date Latitude (°N) Longitude (°E)
1.-Karnataka-Program-Schedule-MIS-2021.docx 2500 0123456 Govt Project 03/04/2023 30/04/2023 15.3173°N 75.7139°E Lease:upto 3 years
Additional Documents Image: kawar-img-2 PDF: 1.-Karnataka-Program-Schedule-MIS-2021

CONTENT OWNED AND MAINTAINED BY : Infrastructure Development Ports & Inland Water Transport Department

Last Updated : 05-10-2023 01:13 PM

Designed, Developed and Hosted by: Center for e-Governance - Web Portal, Government of Karnataka © 2024, All Rights Reserved.